ತಾಜಾ - b'ಬಿಸಿ' ಸುದ್ದಿ

« »

: " ಸ್ಪರ್ಧಾರ್ಥಿ ತಾಣದಲ್ಲಿ ಹೊಸತು " ಉಚಿತ NewsLetterಗಾಗಿ ಇಲ್ಲಿ ನಿಮ್ಮ MAIL ID ನೀಡಿ :

ಈ ತಾಣದಲ್ಲಿನ ಯಾವುದೇ ಆಂಗ್ಲ ಶಬ್ದದ ಅರ್ಥ ತಿಳಿಯದಿದ್ದರೆ ಆ ಶಬ್ದದ ಮೇಲೆ Double Click ಮಾಡಿ

e-ಪತ್ರಿಕೆ ನಿಮ್ಮ ಸ್ವಂತದ್ದು. ಲೇಖನ ಬರೆದು ನಿಮ್ಮ ಜ್ಞಾನ ಹಂಚಿಕೊಳ್ಳಿ ..

ನಿಮ್ಮ (ಕೃತಿಚೌರ್ಯವಲ್ಲದ)ಲೇಖನಗಳನ್ನ ಇಲ್ಲಿಗೆ ಕಳಿಸಿ : spardharthi@gmail.com

ಗುಟುಕು ಜ್ಞಾನಕ್ಕಾಗಿ ...

Aug 23, 2012

ಶ್ರೀ ಜಿ.ವೆಂಕಟಸುಬ್ಬಯ್ಯನವರಿಗೆ 100 ವಸಂತ ತುಂಬಿದ ಸಂಭ್ರಮ !!

0 ಪ್ರತಿಕ್ರಿಯೆಗಳು
.

: ಶ್ರೀ ಜಿ.ವೆಂಸುಬ್ಬಯ್ಯನವರ ಕಿರು ಪರಿಚಯ :


 


.
ಜನನ : ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ ತಾಲ್ಲೂಕಿನ ಕೈಗೋನಹಳ್ಳಿಯಲ್ಲಿ 23ನೇ ಆಗಸ್ಟ್ 1913 ರಂದು

ತಂದೆ : ಶ್ರೀ ಗಂಜಾಂ ತಿಮ್ಮಣ್ಣಯ್ಯ


ತಾಯಿ : ಶ್ರೀಮತಿ ಸುಬ್ಬಮ್ಮ


ವಿದ್ಯಾಭ್ಯಾಸ :  ಮೈಸೂರು ವಿವಿಯಿಂದ ಎಂ.ಎ.


ನೌಕರಿ : ಮೈಸೂರು ಮಹಾರಾಜ ಕಾಲೇಜಿನಲ್ಲಿ ಉಪನ್ಯಾಸಕ ಹುದ್ದೆಗೆ ಸೇರಿ - ಬೆಂಗಳೂರಿನ ವಿಜಯ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕ ಹುದ್ದೆಗೆ ಸೇರಿ ಪ್ರಾಂಶುಪಾಲರಾಗಿ ನಿವೃತ್ತಿ


ಕೃತಿಗಳು : 


  • ನಯನಸೇನ, 
  • ಅನುಕಲ್ಪನೆ, 
  • ನಳಚಂಪು,
  • ಅಕ್ರೂರ ಚರಿತ್ರೆ, 
  • ಲಿಂಡನ್ ಜಾನ್ಸನ್ ಕಥೆ, 
  • ಸಂಯುಕ್ತ ಸಂಸ್ಥಾನ ಪರಿಚಯ, 
  • ಶಂಕರಾಚಾರ್ಯ, 
  • ಕಬೀರ್, 
  • ಇದು ನಮ್ಮ ಭಾರತ, 
  • ಸರಳಾದಾಸ್, 
  • ರತ್ನಾಕರವರ್ಣಿ, 
  • ದಾಸಸಾಹಿತ್ಯ, 
  • ವಚನಸಾಹಿತ್ಯ, 
  • ಶಾಸನ ಸಾಹಿತ್ಯ, 
  • ಷಡಕ್ಷರ ದೇವ, 
  • ಸರ್ವಜ್ಞ, 
  • ಕನ್ನಡ-ಕನ್ನಡ ಇಂಗ್ಲೀಷ್ ನಿಘಂಟು, 
  • ಕನ್ನಡ-ಕನ್ನಡ ಕ್ಲಿಷ್ಟ ಪದಕೋಶ, 
  • ಇಂಗ್ಲೀಷ್-ಕನ್ನಡ ನಿಘಂಟು, 
  • ಹೊಯ್ಸಳ ಕರ್ನಾಟಕ ರಜತೋತ್ಸವ ಸಂಪುಟ, 
  • ಮುದ್ದಣ ಭಂಡಾರ ಭಾಗ-೧, 
  • ಮುದ್ದಣ ಭಂಡಾರ ಭಾಗ-೨, 
  • ಕಾವ್ಯಲಹರಿ, 
  • ಕನ್ನಡ ಸಾಹಿತ್ಯ ಬೆಳೆದು ಬಂದ ದಾರಿ, 
  • ಕನ್ನಡವನ್ನು ಉಳಿಸಿ ಬೆಳೆಸಿದವರು, 
  • ಪ್ರೊ|| ಟಿ.ಎಸ್. ವೆಂಕಣ್ಣಯ್ಯನವರು, 
  • ಕವಿ ಜನ್ನ, ಡಿ.ವಿ.ಗುಂಡಪ್ಪನವರು, 
  • ಕನ್ನಡದ ನಾಯಕಮಣಿಗಳು, 
  • ಕರ್ಣಕರ್ಣಾಮೃತ, 
  • ನಾಗರಸನ ಭಗವದ್ಗೀತೆ, 
  • ತಮಿಳು ಕತೆಗಳು, 
  • ಇಗೋ ಕನ್ನಡ-೧, 
  • ಇಗೋ ಕನ್ನಡ-೨, 
  • ಮುದ್ದಣ ಪದಪ್ರಯೋಗಕೋಶ, 
  • ಎರವಲು ಪದಕೋಶ, 
  • ಕುಮಾರವ್ಯಾಸನ ಅಂತರಂಗ


... ಮುಂತಾದವು

ಅಲಂಕರಿಸಿದ ಹುದ್ದೆಗಳು : 


  • ಕ.ಸಾ.ಪ. ಕಾರ್ಯದರ್ಶಿ
  • 1964 ರಿಂದ 1969 ರವರೆಗೆ ಕ.ಸಾ.ಪ. ಅಧ್ಯಕ್ಷ ಹುದ್ದೆ
  • ಕನ್ನಡ ಸುಡಿ ಪತ್ರಿಕೆಯ ಸಂಪಾದಕರಾಗಿ ಸೇವೆ
  • ಕನ್ನಡ-ಕನ್ನಡ ಕೋಶದ ಸಮಿತಿಯ ಅಧ್ಯಕ್ಷರು ಹಾಗೂ ಪ್ರಧಾನ ಸಂಪಾದಕರು
  • ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯರು
  • ಅಖಿಲ ಭಾರತ ನಿಘಂಟುಕಾರರ ಸಂಘದ ಉಪಾಧ್ಯಕ್ಷರು
  • ಕೇಂದ್ರ ಸರ್ಕಾರದ ಭಾರತೀಯ ಭಾಷಾ ಸಮಿತಿಯ ಕನ್ನಡ ಪ್ರತಿನಿಧಿ
... ಮುಂತಾದವು

ಬಿರುದುಗಳು :

  • ನಿಘಂಟು ಸಾರ್ವಭೌಮ, 
  • ಸಂಚಾರಿಜೀವಂತಪದಕೋಶ, 
  • ಭಾಷಾವಿಜ್ಞಾನ ಪ್ರವೀಣ, 
  • ಪದಗಳಕಣಜ, 
  • ನಿಘಂಟು ನಿಸ್ಸೀಮ, 
  • ಶಬ್ಧರ್ಷಿ, 
  • ಪದಜೀವಿ, 
  • ಪದಗುರು, 
  • ನಡೆದಾಡುವ ನಿಘಂಟು, 
  • ಶಬ್ದಸಂಜೀವಿನಿ, 
  • ಶಬ್ದಬ್ರಹ್ಮ, 
  • ಶಬ್ದಸಾಗರ, 
  • ಶಬ್ದಸಹಾಯವಾಣಿ, 
  • ಶಬ್ದಗಾರುಡಿಗ, 
  • ಶಬ್ದಶಿಲ್ಪಿ, 
  • ಚಲಿಸುವ ಜ್ಞಾನಭಂಡಾರ,
  • ಕನ್ನಡದ ಕಿಟ್ಟಲ್

... ಮುಂತಾದವು

ಪ್ರಶಸ್ತಿಗಳು :


  •  ಮುದ್ದಣ ಭಂಡಾರ ಗ್ರಂಥಕ್ಕೆ ೧೯೮೭ ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ 
  • ಸಾಹಿತ್ಯ ಸಾಧನೆಗಾಗಿ ೧೯೯೧ ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, 
  • ೧೯೯೨ ರಲ್ಲಿ ಮಾಂಟ್ರಿಯಲ್ ಕೆನಡದಲ್ಲಿ ನಡೆದ ಕನ್ನಡ ಸಮ್ಮೇಳನದ ಗೌರವ ಆತಿಥ್ಯ, 
  • ೧೯೯೭ ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ, 
  • ೧೯೯೮ ರಲ್ಲಿ ಶಂಬಾ ಪ್ರಶಸ್ತಿ, 
  • ೧೯೯೯ ರಲ್ಲಿ ಸೇಡಿಯಾಪು ಪ್ರಶಸ್ತಿ, 
  • ೧೯೯೯ ರಲ್ಲಿ ಶಿವರಾಮ ಕಾರಂತ ಪ್ರಶಸ್ತಿ, 
  • ೨೦೦೦ ದಲ್ಲಿ ಕರ್ನಾಟಕ ಪತ್ರಿಕಾ ಅಕಾಡೆಮಿಯ ವಿಶೇಷ ಪ್ರಶಸ್ತಿ, 
  • ೨೦೦೧ ರಲ್ಲಿ ವನಮಾಲಿ ಪ್ರಶಸ್ತಿ, 
  • ೨೦೦೩ ರಲ್ಲಿ ಮುದ್ದಣ ಪುರಸ್ಕಾರ, 
  • ೨೦೦೫ ರಲ್ಲಿ ಮಾಸ್ತಿ ಪ್ರಶಸ್ತಿ, 
  • ೨೦೦೫ ರಲ್ಲಿ  ನಾಡೋಜ ಪ್ರಶಸ್ತಿ, 
  • ೨೦೦೭ ರಲ್ಲಿ ಮೂಡುಬಿದರೆಯ ಪ್ರತಿಷ್ಠಿತ ಆಳ್ವಾಸ್ ನುಡಿಸಿರಿಯ ಅಧ್ಯಕ್ಷತೆಯ ಗೌರವ, 
  • ೨೦೦೮ ರಲ್ಲಿ ಪ್ರತಿಷ್ಠಿತ ಅನಕೃ ನಿರ್ಮಾಣ್ ಸ್ವರ್ಣ ಪ್ರಶಸ್ತಿ, 
  • ೨೦೦೯ ರಲ್ಲಿ ಕರ್ನಾಟಕ ವಿಜ್ಞಾನ ಪರಿಷತ್ತಿನ ರಜತೋತ್ಸವ ಪ್ರಶಸ್ತಿ, 
  • ೨೦೧೦ ರಲ್ಲಿ ಗೋಕಾಕ್ ವಾಙ್ಮಯ ಟ್ರಸ್ಟ್‌ನ ವಿ.ಕೃ. ಗೋಕಾಕ್ ಪ್ರಶಸ್ತಿ 

... ಮುಂತಾದವು

ಬೆಂಗಳೂರಿನಲ್ಲಿ ನಡೆದ ೭೭ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು. 

Aug 22, 2012

ಚೀನಾ ಬಿಡಿ - ಅದರದ್ದು ಎಲ್ಲೆಡೆ ವಾಮಮಾರ್ಗ - ಅಮೆರಿಕಾ ಹೇಗೆ ಒಲಿಂಪಿಕ್ಸ್ ನಲ್ಲಿ ಮುಂದೆ ??

2 ಪ್ರತಿಕ್ರಿಯೆಗಳು



ಎಲ್ಲರಿಗೂ ತಿಳಿದಿರುವ ಹಾಗೆ ಅಮೆರಿಕನ್ನರಿಗೆ ಧರ್ಮಕ್ಕಿಂತ ದೇಶದ ಬಗ್ಗೆ ಪ್ರೀತಿ ಜಾಸ್ತಿ. Country First ಎಂಬ ನೀತಿ ಅವರದ್ದು. ನಾವು ಹೇಗೆ ನಮ್ಮ ದೇಶದ ಬಗ್ಗೆ ಹೇಳಿಕೊಳ್ಳುವಾಗ ನಮ್ಮದು ಸಂಪದ್ಭರಿತ ರಾಷ್ಟ್ರ - ಜಾತ್ಯಾತೀತ ರಾಷ್ಟ್ರ - ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ರಾಷ್ಟ್ರ ಎಂಬಿತ್ಯಾದಿಯಾಗಿ ಹೇಳಿಕೊಳ್ಳೂತ್ತೇವಲ್ಲ ... ಅದೇ ರೀತಿ ಅವರು ಈ ಕೆಳಗಿನಂತೆ ಹೇಳಿಕೊಳ್ಳುವದು ಸರ್ವೇ ಸಾಧಾರಣವಾಗಿ ಕಂಡುಬರುತ್ತದೆ....

"The United States of America is exceptional among the nations of the world.  Unlike most other countries, there is no overarching ethnic or religious affiliation that identifies one as an “American.”Rather, what binds the more than 300 million Americans together is a shared civic identity. 

ಇಂತಿಪ್ಪ ದೇಶದಲ್ಲಿ ಕ್ರೀಡೆಯ ಬಗೆಗಿನ ದೃಷ್ಟಿಕೋನ ಹೇಗಿರಬಹುದು ಎಂಬ ಕುತೂಹಲಕ್ಕಾಗಿ ಮಾಹಿತಿಯನ್ನು ತಡಕಾಡಿದಾಗ ಕೆಲವು ಕುತೂಹಲಕರ ಅಂಶಗಳು ಸಿಕ್ಕಿದ್ವು. ನಿಮ್ಮೊಂದಿಗೆ ಅವುಗಳನ್ನು ಹಂಚಿಕೊಳ್ಳೋಣ ಅಂತ ಈ ಬರಹ.


  • ಅಮೆರಿಕದಲ್ಲಿ ಕ್ರೀಡಾ ಚಟುವಟಿಕೆಗಳನ್ನು ಸಂಪೂರ್ಣ ತನ್ನ ಹಿಡಿತದಲ್ಲಿಟ್ಟುಕೊಂಡಿರುವ  ಇಲಾಖೆ ಎಂಬುದಿಲ್ವಂತೆ.  President's Council on Physical Fitness and Sports ಎಂಬ ಸಮಿತಿ ದೇಶದ ಕ್ರೀಡಾ ಚಟುವಟಿಕೆಗಳ ಬಗ್ಗೆ ಅಮೆರಿಕದ ಅಧ್ಯಕ್ಷರಿಗೆ ಮಾಹಿತಿ ನೀಡುತ್ತಾ ದೇಶದ ನಾಗರಿಕರ ಆರೋಗ್ಯ ಸುಧಾರಣೆಯ ದೃಷ್ಟಿಯಿಂದ ಕ್ರೀಡೆಯನ್ನು ಶಿಫಾರಸ್ಸು ಮಾಡುತ್ತದಂತೆ.
  • ಅಮೆರಿಕ ಸಂಸತ್ತು ಅಖೈರುಗೊಳಿಸಿರುವ ಅಮೆರಿಕಾ ಒಲಿಂಪಿಕ್ ಅಸೋಸಿಯೇಷನ್   ಸಂಸ್ಥೆಯು ಎಲ್ಲ ದೇಶಗಳ ಹಾಗೆ ತನ್ನ ದೇಶದಲ್ಲಿ ಒಲಿಂಪಿಕ್ ಪಾಲ್ಗೊಳ್ಗಲುವಿಕೆಗೆ ಸಂಬಂಧಿಸಿದ ಜವಾಬ್ದಾರಿ ಹೊಂದಿದೆ. ಇದರಲ್ಲೇನಿದೆ ವಿಶೇಷ ಅಂದಿರಾ - ಆಯ್ಕೆಯಾಗುವ ಕ್ರೀಡಾಳುಗಳು ತಯಾರಾಗುವ ಬಗೆಯೇ - American Special !!
  • ಎಲ್ಲ ದೇಶಗಳಲ್ಲೂ Amateur Sports ಮತ್ತು Proffessional Sports ಎಂಬ ಎರಡು ವಿಧಗಳಿರುತ್ತವೆ. ಶಾಲಾ ಕಾಲೇಜುಗಳಲ್ಲಿ ಗಲ್ಲಿ ಗಲ್ಲಿಗಳಲ್ಲಿ ಸಮಯ ಕಳೆಯಲು ಅಥವಾ ಆಟದ ಸಮಯವನ್ನು ಪೂರೈಸಲು ಅಥವಾ ಹವ್ಯಾಸದ ಭಾಗವಾಗಿ ಆಟ ಆಡುವ ರೀತಿಗೆ  Amateur Sports  ಎನ್ನಬಹುದು.  ಈ ತೆರನಾದ ಕ್ರೀಡೆಯ ಪಾಲ್ಗೊಳ್ಳುವಿಕೆಯಲ್ಲಿ ಗಂಭೀರತೆ ಕಡಿಮೆ. ಈ ಹಂತದಲ್ಲಿ ಅನೇಕ ಉತ್ತಮ ಕ್ರೀಡಾಪಟುಗಳು ಸರಿಯಾದ ಮಾರ್ಗದರ್ಶನವಿಲ್ಲದೆ ಉತ್ತಮ ಕ್ರೀಡಾ ಭವಿಷ್ಯ ಕಳೆದುಕೊಂಡು ಯಾವುದೋ ಬ್ಯಾಂಕಿನಲ್ಲಿ - ಸರ್ಕಾರೀ ಕಚೇರಿಯಲ್ಲಿ - ಇಲ್ಲಾ ಸಾಫ್ಟ್ ನೌಕರಿಯಲ್ಲಿ ಜಾಗ ಪಡೆದು ಸಂಸಾರ ಸಾಗರಕ್ಕೆ ಧುಮುಕಿ ಹಿಂದೊಮ್ಮೆ ತಾವು ಕ್ರೀಡೆಯಲ್ಲಿ ಮುಂದಿದ್ದೆವು ಎಂಬ ಕತೆಗಳನ್ನು ಮೊಮ್ಮಕ್ಕಳಿಗೆ ಹೇಳುವ ತಾತಂದಿರಾಗಿಬಿಡುತ್ತಾರೆ.
    ಅಮೆರಿಕ ಒಲಿಂಪಿಕ್ಸ್ ನಲ್ಲಿ ಗಳಿಸಿ ಒಟ್ಟು ಪದಕಗಳೊಂದಗೆ ಚಿನ್ನದ ಪದಕಗಳ %  GRAPH
  • ಆದರೆ ಅಮೆರಿಕದಲ್ಲಿ Amateur Sports ಬಗ್ಗೆ ಕೂಡ ಗಮನಹರಿಸಲಾಗುತ್ತದೆ.  ಈ ಒಂದು ಅಂಶವೇ ಸಾಕು ಅಮೆರಿಕವನ್ನು ಇತರ ದೇಶಗಳಿಂದ ವಿಭಿನ್ನವಾಗಿರಿಸಲು. ಮಾಧ್ಯಮಿಕ ಮತ್ತು ಪಿಯು ಹಂತದ ಶಾಲೆಗಳಲ್ಲಿ(Secondary & Tertiary Educational Institutions) ಕ್ರೀಡೆಗಳಲ್ಲಿ ಅಭ್ಯಾಸದ ಕಡೆಗಿನ  ಉತ್ಸುಕತೆಯಷ್ಟೇ ಕ್ರೀಡೆಯ ಕಡೆಗೂ ಇಟ್ಟುಕೊಂಡು ಪಾಲ್ಗೊಳ್ಳುವವರ ಸಂಖ್ಯೆ ಹೆಚ್ಚಿತ್ತು -ಹೆಚ್ಚಿದೆ- ಹೆಚ್ಚಿರುತ್ತದೆ. ಅದುವೇ ಅಲ್ಲಿನ ಜನಜೀವನದ ವಿಶೇಷತೆ. ಈ ಬಗ್ಗೆ ಕ್ರೀಡಾಸಕ್ತ ವಿದ್ಯಾರ್ಥಿಗಳ  ಆಸಕ್ತಿಯನ್ನು ಪೋಷಿಸಲು  National Collegiate Athletic Association  ಎಂಬ ಶಾಲಾ ಕಾಲೇಜುಗಳ ಸಂಘವೊಂದನ್ನು ಸ್ಥಾಪಿಸಿಕೊಂಡಿದ್ದಾರೆ.   ನಾನು ಮೊದಲೇ ಹೇಳಿದಂತೆ ಸರ್ಕಾರದ ನೇರ ಹಸ್ತಕ್ಷೇಪ ಇಲ್ಲ  ಎಂಬುದನ್ನು ನಾನು ನಿಮಗಿಲ್ಲಿ ತೋರಿಸಿಕೊಟ್ಟ ಹಾಗಾಯಿತು.  ಸುಮಾರು 1281 ಶಿಕ್ಷಣ ಸಂಸ್ಥೆಗಳು ಇದರ ಭಾಗವಾಗಿವೆ. ಈ ಸಂಸ್ಥೆ ಕ್ರೀಡೆಯಲ್ಲಿ ಮುಂದಿರುವ ಹುಡುಗರನ್ನು ತನ್ನ ಸುಪರ್ದಿಯಲ್ಲಿರುವ ಶಾಲೆಗಳ ಮುಖಾಂತರ ಗುರುತಿಸಿ ಅವರಿಗೆ ಹೇರಳ ಶಿಷ್ಯವೇತನ ನೀಡುತ್ತದೆ.  ಅಷ್ಟೇ ಅಲ್ಲ  ಈ NCAA ಗೆ ಕಾರ್ಫೊರೇಟ್ ಜಗತ್ತಿನ ಹಣಕಾಸಿನ ಬೆಂಬಲ ಇರುವುದು ಅಲ್ಲಿನ ಅತಿ ದೊಡ್ಡ ಪ್ಲಸ್ ಪಾಯಿಂಟ್. ವಿಕಿ ಪುಟದಿಂದ ಹೆಕ್ಕಿ ತೆಗೆದ ಮಾಹಿತಿಯ ಪ್ರಕಾರ  ಈ ಕೆಳಕಂಡ ಹೆಸರಾಂತ ಕಂಪೆನಿಗಳು ಆ ಧೇಶದಲ್ಲಿ ಕ್ರೀಡೆಯಲ್ಲಿ ಹಣ ತೊಡಗಿಸಿರೋದನ್ನು ನೀವು ಕಾಣಬಹುದು.
Sponsors
CompanyCategorySince
AT&TWireless services2001
Coca-ColaNon-alcoholic beverages2002
The HartfordMutual funds and related financial services2004
Enterprise Rent-A-CarCar rental2005
Lowe'sHome improvement2005
CapitalOneBanking and credit cards2008
Kraft (Planters)Snack foods2008
Hershey's (Reese's)Candy2009
LGElectronics2009
UPSPackage delivery and logistics2009
Nissan (Infiniti)Car & parts2010
UnileverPersonal-care products2010

    NCAA Basketball ಟೂರ್ನಿಯಲ್ಲಿ ಪಾಲ್ಗೊಂಡ ತಂಡಗಳ ಬೃಹತ್ ಪಟ್ಟಿ
  • ನಂತರದ್ದು ಕ್ರೀಡಾ ಕ್ಲಬ್ ಗಳ ಸರದಿ. ಅವು ಪ್ರತಿ ವರ್ಷ ಹೊಸ ಹೊಸ ಪ್ರತಿಭಾವಂತ ಹುಡುಗರನ್ನು  ಆರಿಸಿ ತಮ್ಮ ವಾರ್ಷಿಕ ಕ್ರೀಡಾ ಡ್ರಾಫ್ಟ್ ನಲ್ಲಿ ಸೇರಿಸಿಕೊಳ್ಳುತ್ತಾರೆ. ಹಾಗೆ ಸೇರ್ಪಡೆಗೊಂಡ ವಿದ್ಯಾರ್ಥಿ ಕ್ರೀಡಾರ್ಥಿಯಾಗಿ ಬದಲಾಗುತ್ತಾನೆ. ಇಲ್ಲಿಂದಲೇ ಅವರ ಜೀವನದಲ್ಲಿ ಯೂ - ಟರ್ನ್ !!

..

... ಮುಂದುವರೆದ ಭಾಗ ನಾಳೆ

Aug 19, 2012

ಒಲಿಂಪಿಕ್ಸ್ ನಲ್ಲಿ ಚೀನಾ ನಮಗಿಂತ ಮುಂದೆ...ನಾವು ಅವರಿಂಗಿಂತ ತುಂಬಾ ಹಿಂದೆ.. ಯಾಕಿರಬಹುದು ?

0 ಪ್ರತಿಕ್ರಿಯೆಗಳು
ನಮಸ್ತೆ...

ಬಹಳ ದಿನದ ನಂತರ ಏನಾದರೂ ಬರೆಯೋ ಮನಸಾಗಿದೆ. ಯಾವ ವಿಷಯದ ಮೇಲೆ ಬರೆಯೋದು ಅಂತ ವಿಚಾರ ಮಾಡಿದಾಗ ಒಲಿಂಪಿಕ್ಸ್ ನೆನಪಾಯ್ತು. ಪದಕ ಪಟ್ಟಿ - ಸಾಧನೆ ಮಾಹಿತಿಗಿಂತ ವಿಭಿನ್ನವಾದದ್ದನ್ನ ಪರಿಚಯಿಸೋಣ ಅಂತ ಈ ವಿಷಯ ಎತ್ಕೊಂಡಿದೀನಿ. 

ಮೊದಲು ಈ ವಿಡಿಯೋ ನೋಡಿ : ಇದು ಸ್ವಯಂ ವೇದ್ಯ ವಿಡಿಯೋ !!

-------





http://youtu.be/qij0QULBBdk
-------


ಈಗ ನಾನು ಸಂಗ್ರಹಿಸಿರುವ ಮಾಹಿತಿಯನ್ನು ನಂಬುವುದಾದರೆ...

" 1980ರ ದಶಕದಿಂದ ಚೀನಾ ಅಥ್ಲೀಟ್ ಗಳನ್ನು ತಯಾರು ಮಾಡುವ ಕಾರ್ಯವನ್ನು ಪ್ರಾರಂಬಿಸಿತಂತೆ. ಚೀನಾ ದೇಶದ ಎಲ್ಲ ಶಾಲಾಶಿಕ್ಷಕರಿಗೆ ತಮ್ಮ ಶಾಲೆಯಲ್ಲಿ ಕ್ರೀಡೆಯಲ್ಲಿ ಜನ್ಮತಹ ಗುಣ ಹೊಂದಿ ಮುಂದಿರುವ ಮಕ್ಕಳನ್ನು ಗುರುತಿಸುವಂತೆ ಸೂಚಿಸಲಾಗುತ್ತಂತೆ. ಅಲ್ಲದೇ ಅಂತಹ ಮಕ್ಕಳ ಬಗೆಗಿನ ಮಾಹಿತಿಯನ್ನು ಹತ್ತಿರದ ಸರ್ಕಾರ ಅಧಿಸೂಚಿಸಿದ ಸರ್ಕಾರಿ ಅಧಿಕಾರಿಗೆ ತಿಳಿಸಲು ಸೂಚಿಸಲಾಗಿರುತ್ತದಂತೆ. ಅಂತಹ ಅಧಿಕಾರಿಗಳು ಶಿಕ್ಷಕರು ಸೂಚಿಸಿದ ಮಕ್ಕಳನ್ನು ಪರೀಕ್ಷೆಗೊಳಪಡಿಸಿ  ಹತ್ತಿರದ  ಕ್ರೀಡಾ ತರಬೇತುದಾರನ ಹತ್ತಿರ ಬಿಡುತ್ತಾರಂತೆ.  ತದನಂತರ ಚೀನಾ ದೇಶದಾದ್ಯಂತ ತೆರೆದಿರುವ ಸುಮಾರು 3000 ಕ್ರೀಡಾ ಹಾಸ್ಟೆಲ್ ಗಳ ಪೈಕಿ ಸದರಿ ಮಗು ಯಾವ ಕ್ರೀಡೆಯಲ್ಲಿ ಮುಂದಿದೆಯೋ ಅಂತಹ ಕ್ರೀಡೆಗೆ ಸಂಬಂಧಿಸಿದ ಹಾಸ್ಟೆಲ್ ಗೆ ಕಳುಹಿಸಲಾಗುತ್ತದಂತೆ. ಸದರಿ ಮಕ್ಕಳನ್ನು ಬಹುತೇಕ ಬಾರಿ ತಂದೆ ತಾಯಿಯರಿಂದ ದೂರ ಮಾಡಿ ಇರಿಸಲಾಗುತ್ತದಂತೆ. ಹೀಗೆ ಅತಿ ಚಿಕ್ಕ ವಯಸ್ಸಿನಲ್ಲಿ ತರಬೇತಿಗೆ ನಿಯೋಜಿತವಾದ ಮಗುವಿಗೆ " ನಿನ್ನ ಜೀವನದ ಗುರಿ - ಒಲಿಂಪಿಕ್ ಪದಕ "  ಎಂಬುದಾಗಿ ನಂಬಿಸಿ ಅಚ್ಚೊತ್ತುವಂತೆ ಮಾಡಿ ಆ ನಿಟ್ಟಿನಲ್ಲಿ ಸಫಲರಾಗುವಂತೆ ಮಾಡುವುದೇ ಚೀನಾ ದೇಶ ಅನುಸರಿಸುವ ವಿಧಾನವಂತೆ.... "




ಈ ಪ್ಯಾರಾವನ್ನು ಅಂತೆ-ಕಂತೆಯ ರೀತಿ ಬರೆದ್ದೇಕೆಂದರೆ ನನಗೆ ಈ ವಿಷಯದ ಸತ್ಯಾತ್ಯತೆಯ ಬಗ್ಗೆ ಖಚಿತತೆ ಇಲ್ಲ. ಆದರೆ 75 ಪ್ರತಿಶತ ಇದು ಸತ್ಯ ಎಂದು ಓದಿ ನಂಬಿದ್ದೇನೆ. ಅದಕ್ಕೇನೆ ಈ ಮಾಹಿತಿಯನ್ನ ನಿಮಗೂ ನೀಡಿ ಸತ್ಯಾಸತ್ಯತೆಯನ್ನು ನಿಮ್ಮಿಂದಲೂ ಪರೀಕ್ಷೆ ಮಾಡಿಸೋಣ ಅಂತನ್ನುವುದು ನನ್ನ ಉದ್ದೇಶ.

ನೀವೂ ಕೂಡ ಓದಿ ತಿಳಿದುಕೊಂಡು ಪ್ರತಿಕ್ರಿಯಿಸಿ.

.
 
:   ಸ್ಪರ್ಧಾರ್ಥಿ
.

ಸ್ಪರ್ಧಾರ್ಥಿ ತಂಡದ ಇತರೆ ಉಪಯುಕ್ತ Blog ಗಳು

ಸಂದರ್ಶಿ ಅಭಿಪ್ರಾಯ ಪೆಟ್ಟಿಗೆ